May 6, 2009


ರುದ್ರನರ್ತನ

ನಿಲ್ಲಿಸೈ ಶಿವತಾಂಡವ
ರಕ್ಷಿಸೈ ಬ್ರಹ್ಮಾಂಡವ
ನೀನೆ ಹಗೆಯಾಗಿ ಎರಗಲು
ಪೊರೆವರಾರೊ ಲೋಕವ

ಅಂಕೆಮೀರಿದೆ ಸೃಷ್ಟಿಕರ್ತನೆ
ಆಲಿಸು ಆಕ್ರಂದನ
ಅರ್ತನಾದವ ಕೇಲುತಿಲ್ಲವೆ
ನಿಲ್ಲಿಸೈ ರುದ್ರನರ್ತನ

ಬಂಧುಬಳಗ ತಂದೆ-ತಾಯ
ಅರಿಯದ್ಹೈಕಳ ಒಟ್ಟಿಗೆ
ಸೃಷ್ಟಿಯನ್ನೇ ಲಯಗಯ್ಯುವಾಸೆಯೆ
ಎಲ್ಲ ನೀಡಿಹ ಕರುಣೆಗೆ

ನೀನಿತ್ತ ಪರಿಸರ ಬೆಳೆದ ಗಿಡಮರ
ಕಡಿತಕ್ಕಿದು ಪ್ರತೀಕಾರವೆ
ಏನೂ ಅರಿಯದ ಮುಗ್ಧರೊಟ್ಟಿಗೆ
ನಡೆದ ಮಾರಣಹೋಮವೆ?

ಹಡೆದಮಾತೆಯೆ ಒಡಲಿರಿದೊಡೆ
ಉಳಿವುದಾರ ಬಳಿಯಲಿ!
ರಕ್ಷೆ ನೀಡುವ ಕರವೆ-ಕೊಯ್ದೊಡೆ
ಉರಿಯನಾರಿಗೆ ಅರುಹಲಿ! |

ಸಾಕು ಮಾಡೈ ಶಿವತಾಂಡವ
ವೀಕ್ಷಿಸೈ ಕರ್ಮಕಾಂಡವ
ಸೃಷ್ಟಿಕರ್ತನೆ ಲಯಕಾರನಾದೊಡೆ
ಪೊರೆವನಾರೊ ಲೋಕವ |


Submitted By: Suresh Babu M. Vijayanagar, Bangalore

3 comments:

  1. Actually I am very much interesting in kannada poems, this new modern poems are booming in kannada..it is sweet like jangiri..

    ReplyDelete
  2. Nice poem, i like to see these type of poems in English also

    ReplyDelete
  3. What are this. Is in arabian language?

    ReplyDelete

Please avoid abusive language. Usage of which might lead to deletion of your comment. And try to embed in your comment something that can be useful to the artist above. Something that can help him/her improve.