ಹರುಷದ ಹೊಳೆಯನೆ ಹರಿಸಲಿ
ದ್ವೇಷ-ಅಸೂಯೆ ತೊಲಗಿಸುತ
ಎಲ್ಲರ ಬಾಳನು ಬೆಳಗಿಸಲಿ
ವರುಣದೇವನ ಸಿರಿಕೃಪೆಯೊದಗಿ
ಭುವಿಯಲ್ಲ ಹಸಿರಾಗಿಸಲಿ
ಸುಖ-ಶಾಂತಿ ನೆಮ್ಮದಿ ನೆಲೆಯಾಗಿಸುತ
ಸಂತಸದ ಬೆಳೆ ಬೆಳೆಯಿಸಲಿ
ಯುದ್ಧಭೀತಿ ಕಾರ್ಮೋಡ ಕರಗಿಸಿ
ವಿಕೃತಮನ ಹಗುರಾಗಿಸಲಿ
ಅಂತರಂಗ ವಿಷಜ್ವಾಲೆಯ ನಂದಿಸಿ
ಸ್ನೇಹವನೆಲ್ಲೆಡೆ ಪಸರಿಸಲಿ
ಹಗರಣದ ವಿಷವೃಕ್ಷವ ಉರುಳಿಸಿ
ಸಂತಸದಾ ನಗೆ ಹೊಮ್ಮಿಸಲಿ
ಏರಿಹ ಕಾವು ಶಮನಗೊಳಿಸುತ
ಕಾವೇರಿಗೆ ಬಿಡುಗಡೆ ಕಾಣಿಸಲಿ
ಯುವಜನರೆದೆಯಲಿ ದೇಶಪ್ರೇಮದ
ಪೌರುಷವಾಹಿನಿಯಾಗಿಸಲಿ
ಒಕ್ಕೊರಲದನಿಯೆ ಮಾತೆಯ ಮನಕೆ
ಅಮೃತ ಸಿಂಚನವಾಗಿಸಲಿ.